ಬೆಂಗಳೂರಿನಲ್ಲಿ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳ ಸಭೆ (ಎಫ್‌ಎಂಸಿಬಿಜಿ) ಮತ್ತು ದೆಹಲಿಯಲ್ಲಿ ವಿದೇಶಾಂಗ ಸಚಿವರ ಸಭೆಯೊಂದಿಗೆ (ಎಫ್‌ಎಂಎಂ) ಎರಡು ಪ್ರಮುಖ ಜಿ-20 ಸಚಿವರ ಸಭೆಗಳು ಈಗ ಮುಗಿದಿವೆ. ಆದರೂ ಇದುವರೆಗೂ ಯುಕ್ರೇನ್ ಬಗ್ಗೆ ಯಾವುದೇ ಒಮ್ಮತ ಮೂಡಿಲ್ಲ. ಭಾರತದ ರಾಜತಾಂತ್ರಿಕ ಅಧಿಕಾರಿಗಳು ದೇಶದ ಜಿ-೨೦ ಅಧ್ಯಕ್ಷತೆಯ ಕಾರ್ಯತಂತ್ರವನ್ನು ಮರಳಿ ವಿಮರ್ಶಿಸುವುದು ಉತ್ತಮ. ಎಫ್‌ಎಂಸಿಬಿಜಿ-೨೦ ಅನ್ನು ಏಷ್ಯಾದ ಆರ್ಥಿಕ ಬಿಕ್ಕಟ್ಟಿನ ನಂತರ ಜಾಗತಿಕ ಆರ್ಥಿಕ ಸಮನ್ವಯಕ್ಕಾಗಿ ೧೯೯೯ ರಲ್ಲಿ ಸ್ಥಾಪಿಸಲಾಯಿತು. ಇದು ಜಿ-೨೦ ಯಲ್ಲಿ ಅತ್ಯಾಧುನಿಕ ಆರ್ಥಿಕತೆಗಳ ಪ್ರಮುಖ “ಫೈನಾನ್ಸ್ ಟ್ರ್ಯಾಕ್” ನ ಭಾಗವಾಗಿದೆ. ಮತ್ತೊಂದು “ಶೆರ್ಪಾ ಟ್ರ್ಯಾಕ್” ಜಿ-೨೦ಯ ಗೊತ್ತು ಗುರಿಯನ್ನು ನಿರ್ಧರಿಸುವ ಪ್ರಮುಖ ಸಭೆ. ಯುಕ್ರೇನ್ ಕುರಿತು ರಷ್ಯಾ ಮತ್ತು ಪಶ್ಚಿಮದ ನಡುವಿನ ಅಂತರ ತಗ್ಗಿಸಲು ಕಳೆದ ವರ್ಷ ಇಂಡೋನೇಷ್ಯಾದಲ್ಲಿ ಭಾರತ ನಡೆಸಿದ ಪ್ರಯತ್ನದಿಂದ ಭೌಗೋಳಿಕ ರಾಜಕೀಯ ಬದಲಾವಣೆಗಳ ನಡುವೆ ಭಾರತದ ಜಿ-೨೦ ಅಧ್ಯಕ್ಷತೆಯ ಸವಾಲುಗಳು ನಮಗೆ ಸ್ಪಷ್ಟವಾಗಿರಬೇಕು. ಆದರೆ ಬೆಂಗಳೂರಿನಲ್ಲಿ ರಷ್ಯಾ ಮತ್ತು ಚೀನಾ ಮೂರು ತಿಂಗಳ ಹಿಂದೆ ಯುಕ್ರೇನ್ ಯುದ್ಧದ ಬಗ್ಗೆ ಒಪ್ಪಿಕೊಂಡ ಭಾಷೆಯ ಬಳಕೆಯನ್ನು ನಿರಾಕರಿಸಿದ್ದು ಆಶ್ಚರ್ಯಕರ. ಆದ್ದರಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಂಟಿ ಹೇಳಿಕೆಯ ಬದಲು ಅಧ್ಯಕ್ಷರ ಹೇಳಿಕೆಯನ್ನಷ್ಟೆ ನೀಡಬೇಕಾಯಿತು. ಆದರೆ ರಷ್ಯಾ ಮತ್ತು ಚೀನಾ ವಿರೋಧಿಸಿದ ಪ್ಯಾರಾಗಳನ್ನು ದಾಖಲೆಯಲ್ಲಿ ನಮೂದಿಸಲು ಸರ್ಕಾರ ನಿರ್ಧರಿಸಿದೆ. ಇದು ಒಂದು ಹೊಸ ಕ್ರಮವಾಗಿದೆ. ಕಳೆದ ವರ್ಷ, ಇಂಡೋನೇಷ್ಯಾ ಅಧ್ಯಕ್ಷತೆಯ ಹೇಳಿಕೆಗಳು “ಅನೇಕ” ದೇಶಗಳ ಭಾವನೆ ಎಂದು ಮಾತ್ರ ಹೇಳಿ, ದೇಶಗಳನ್ನು ಹೆಸರಿಸಿರಲಿಲ್ಲ. ಬೆಂಗಳೂರಿನ ಬಿಕ್ಕಟ್ಟಿನ ನಂತರ ಸರ್ಕಾರವು ಎಫ್‌ಎಂಎಂ ಸಭೆಯಲ್ಲಿ ಜಂಟಿ ಹೇಳಿಕೆಗಾಗಿ ಪ್ರಯತ್ನಿಸಿದ್ದು ಆಶ್ಚರ್ಯಕರವಲ್ಲದಿದ್ದರೂ, ಮಹತ್ವಾಕಾಂಕ್ಷಿಯಾಗಿತ್ತು. ಅಂತಿಮವಾಗಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಕೂಡಾ ಅಧ್ಯಕ್ಷರ ಹೇಳಿಕೆಯನ್ನಷ್ಟೆ ನೀಡಿದರು. ಅದರಲ್ಲಿ ಬಾಲಿ ಹೇಳಿಕೆಯ ಎರಡು ಪ್ಯಾರಾಗಳ ಬಗೆಗಿನ ಭಿನ್ನಾಭಿಪ್ರಾಯಗಳನ್ನು ಉಲ್ಲೇಖಿಸಿದರು. ಈ ಹಿಂದೆ ಎಫ್‌ಎಂಎಂ ಸಭೆಗಳ ತರುವಾಯ ಯಾವುದೇ ಹೇಳಿಕೆ ಬಿಡುಗಡೆ ಮಾಡಿರಲಿಲ್ಲ. ಇದೇ ಮೊದಲು.
ಭಾರತದ ಜಿ ೨೦ ಅಧ್ಯಕ್ಷತೆಯ ಆರಂಭ ಸಮಸ್ಯಾತ್ಮಕವಾಗಿದ್ದರೂ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ನಾಯಕರ ಶೃಂಗಸಭೆಗೆ ಇನ್ನೂ ಸಾಕಷ್ಟು ಸಮಯ ಇದೆ. ಆಹಾರ ಮತ್ತು ಇಂಧನ ಭದ್ರತೆ ಮತ್ತು ಸಾಲ ನಿರ್ವಹಣೆಯಂತಹ ಜಾಗತಿಕ ದಕ್ಷಿಣದ ನಿರ್ಣಾಯಕ ಸಮಸ್ಯೆಗಳಿಗೆ ಸಂಬಂಧಿಸಿದ ಹೆಚ್ಚಿನ ಹೇಳಿಕೆಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಜೈಶಂಕರ್ ಹೇಳಿದ್ದಾರೆ. ಬಾಲಿ ಶೃಂಗಸಭೆಯ ಭಾಷೆಯನ್ನು ಭಾರತವು ಇನ್ನು ನೆಚ್ಚಿಕೊಳ್ಳಲಾಗುವುದಿಲ್ಲ ಎಂಬ ಸ್ಪಷ್ಟತೆ ಈಗ ಮೂಡಿದೆ. ಶೆರ್ಪಾಗಳು ಯುಕ್ರೇನ್ ಬಗ್ಗೆ ಕೊಟ್ಟ ಭಾಷೆಯ ಬಗ್ಗೆ ರಷ್ಯಾದ ತಕರಾರುಗಳು ಮತ್ತು ಅತ್ತ ಬಾಲಿ ಹೇಳಿಕೆಯಲ್ಲಿ ರಷ್ಯಾದ ಖಂಡನೆಯನ್ನು ಬಿಟ್ಟುಕೊಡಲೊಪ್ಪದ ಪಶ್ಚಿಮದ ನಿಲುವು ಎರಡನ್ನೂ ಪರಿಗಣಿಸಿ ಹೊಸತೊಂದು ಒಮ್ಮತದ ಭಾಷೆ ಮೂಡಿಸಲು ಸೃಜನಶೀಲ ಸೂತ್ರಗಳ ಹುಡುಕಾಟ ನಡೆಸುವ ಅಗತ್ಯ ಇದೆ. ಆತಿಥೇಯ ಭಾರತವು ಈ ಬಗ್ಗೆ ಮಧ್ಯಮ ಮಾರ್ಗ ಕಂಡುಕೊಳ್ಳಲು ಜಿ ೭ ಮತ್ತು ಯುಎಸ್ ನೇತೃತ್ವದ ಅಭಿವೃದ್ಧಿ ಹೊಂದಿದ ದೇಶಗಳ ಬೇರೂರಿರುವ ಶಿಬಿರಗಳನ್ನು ಮತ್ತು ಈಗ ಬಲಗೊಂಡಿರುವ ರಷ್ಯಾ ಮತ್ತು ಚೀನಾ ವಲಯವನ್ನು ಬಿಟ್ಟು ಇತರರನ್ನು ಜೊತೆ ತೆಗೆದುಕೊಂಡು ಹೋಗಬೇಕಾದ ಅಗತ್ಯ ಇದೆ.
This editorial has been translated from English, which can be read here.
COMMents
SHARE